ಫೋನ್ ಪುರಾಣ
ಈ ಮೊಬೈಲ್ ಫೋನ್ ಅನ್ನೋದು ನಮ್ಮ ಜೀವನದ ಅವಿಭಾಜ್ಯ ಅಂಗ. ಏನಿಲ್ಲದಿದ್ರೂ ನಡೆಯುತ್ತೆ ಆದ್ರೆ ಮೊಬೈಲ್ ಇಲ್ದೆ ಆಗೊಲ್ಲ ಅನ್ನೋದು ಪರಮ ಸತ್ಯ. ಹುಟ್ಟಿದ 6 ತಿಂಗಳಿಗೆ ಶುರುವಾಗುವ ಮಕ್ಕಳ ಮೊಬೈಲ್ ಪ್ರೇಮ ಈಗ 65 ದಾಟಿದ ಹಿರಿಯರನ್ನೂ ಬಿಟ್ಟಿಲ್ಲ. ಎಷ್ಟರ ಮಟ್ಟಿಗೆ ಅಂದ್ರೆ ಮೆಸ್ಸೇಜ್ ಕಳಿಸಲು ಬೆರಳಲ್ಲಿ ಕುಟ್ಟಿ ಕುಟ್ಟಿ ಇನ್ನೊಂದು ಸಾವಿರ ವರ್ಷದಲ್ಲಿ ನಮ್ಮ ಹೆಬ್ಬೆರಳು ಮಾತ್ರ ದೊಡ್ಡದಾಗಬಹುದು ಅಂತ ವಿಜ್ಞಾನಿಗಳ ಅಭಿಪ್ರಾಯ. ನಾವು ಸಣ್ಣವರಿರುವಾಗ ಅಪ್ಪ ಮನೆಯಿಂದ ಹೊರ ಹೋಗುವ ಮೊದಲು ಗಾಡಿ ಕೀ, ಪರ್ಸು, ಕರ್ಚಿಫ್ ಹೀಗೆ ಎಲ್ಲಾ ತಗೊಂಡ್ರ ಅಂತ ಅವರನ್ನ ನೆನಪಿಸಬೇಕಿತ್ತು. ಈಗೆಲ್ಲ ಬೇರೇನೇ ಬಿಟ್ರು ಮೊಬೈಲ್ ಬಿಟ್ಟು ಮನೆಯಿಂದ ಹೊರಹೋಗೋಹಾಗೆ ಇಲ್ಲ ಬಿಡಿ. ವಸುಧೇಂದ್ರ ಅವರು ಮೊಬೈಲ್ ಮರೆತು ಮೈಸೂರಿಗೆ ಬಂದಾಗ ಆದ ಪಜೀತಿ ಬಗ್ಗೆ ಒಂದು ಲೇಖನದಲ್ಲಿ ಬರೆದಿದ್ದಾರೆ. ಅವತ್ತು ಫೋನ್ ಬುಕ್ಕಿನಲ್ಲಿ ನಂಬರ್ ಹುಡುಕಿ ತೆಗೆದು ಅಡ್ರೆಸ್ ಪತ್ತೆಹಚ್ಚಿದ ಅವರು ಇವತ್ತೇನಾದರೂ ಫೋನ್ ಬಿಟ್ಟು ಬಂದ್ರೆ ಹುಡುಕಲು ಯಾವ ಬುಕ್ಕು ಬೇಕಿಲ್ಲದೆ ಗೂಗಲ್ ಎಂಬ ಮಾಯಾಜಾಲದಲ್ಲಿ ಕ್ಷಣದಲ್ಲಿ ಪತ್ತೆಹಚ್ಚಬಹುದಾದರೂ ಅದಕ್ಕೂ ನಿಮ್ಮ ಫೋನ್ ಕೊಡಿ ಅಂತ ಯಾರನ್ನಾದರೂ ಕೇಳಬೇಕಲ್ಲ ಅನ್ನೋದೆ ಸಮಸ್ಯೆ. ತುಂಬಾ ಹಿಂದೆ ಅಲ್ಲ ಈಗ ಸುಮಾರು 25 ವರ್ಷಗಳ ಹಿಂದೆ ಮನೆಯಲ್ಲಿ ಕೇವಲ landline ಮಾತ್ರ ಇರುತ್ತಿದ್ದ ಕಾಲ. ಅಪ್ಪ ಶಿವಮೊಗ್ಗದಿಂದ 20ಕಿಮೀ ದೂರದ ಹೊಳಲೂರಿನಲ್ಲಿ ಕೆಲಸ ಮಾಡ್ತಿ