Posts

Showing posts from May, 2016

Malenadu- A feel

Image
Hailing from Malenadu (the regions around the Western Ghats in Karnataka) no matter which part of the world I'm in, there always is this longing to return to my roots. But after many years of being outside, I realised that it isn't the longing for a particular place but a feel. Malenadu is a feel.  The lush green paddy fields, the silent streams and roaring rivers, those foggy winter mornings when coffee feels like a drop of elixir, Malenadu has everything that can bind you for a lifetime. It's difficult to explain to a city dweller how natural it is to spot a peacock in your backyard on a chilly December morning or how a green snake coiled around a hibiscus plant doesn't even elicit a cry of alarm from us. The talks of a tiger being spotted near Thyagarthi and how villagers were scared to step out after dark is still etched in my memory. Climb the hill in the backyard of my Granny's house and a cliff is named as Huli Bande meaning Tiger Cliff named so

ಹೀಗೆ ಇನ್ನೊಂದು ಮಲೆನಾಡ ಕಥೆ

ಈ ಮಲೆನಾಡಿನ ಕಥೆಗಳೆ ಹೀಗೆ. ಒಮ್ಮೆ ಹಿಡಿದರೆ ಬಿಡದ ಜಡಿಮಳೆಯಂತೆ. ಹೊಂಡವ್ಯಾವುದು ರಸ್ತೆ ಯಾವುದು ಎಂದು ತಿಳಿಯದಂತೆ ಯಾವುದು ಕಾಲ್ಪನಿಕ ಯಾವುದು ನಿಜ ಎಂದೂ ಒಮ್ಮೊಮ್ಮೆ ಅನುಮಾನ ಕಾಡುತ್ತದೆ. ಬೇಸಿಗೆ ಬಂತೆಂದರೆ ಸೈ ಸಾಗರದ ಹತ್ತಿರದ ಅಜ್ಜಿಯ ಮನೆಯಲ್ಲಿ ಇನ್ನೆರೆಡು ತಿಂಗಳು ಠಿಕಾಣಿ. ಅಜ್ಜಿ ಮಾಡಿದ ಸೌತೆ ದೋಸೆ, ಒಡಪೆ ತಿಂದು ಮಾವನ ಬಳಿ ಕವಳಿಕಾಯಿ ಮಾವಿನಕಾಯಿ ಕುಯ್ಯಲು ಕರೆದೊಯ್ಯಲು ಪೀಡಿಸುತ್ತಾ ಹೊಂಡದಲ್ಲಿ ಈಸುತ್ತೇನೆಂದು ಹೋಗಿ ಬಟ್ಟೆಯೆಲ್ಲಾ ಒದ್ದೆ ಮಾಡಿಕೊಂಡು ಬರುವುದು ಒಂಥರಾ ಪ್ರತೀ ವರ್ಷದ ಸಂಪ್ರದಾಯವೇ ಆಗಿಹೋಗಿತ್ತು.  ಅಡಿಕೆ ತೋಟವೆಂದ ಮೇಲೆ ದಿನಾಗಲೂ ಏನಾದರೂ ಕೆಲಸವಿದ್ದೇ ಇರುತ್ತದೆ. ಗೊಬ್ಬರ ಹಾಕಿಸುವುದೋ ಮರಕ್ಕೆ ಔಷಧಿ ಸಿಂಪಡಿಸುವುದೋ ಇಲ್ಲ ಕಳೆ ಕೀಳುವುದೋ ಹೀಗೆ. ಒಂದು ಗಂಡಾಳು ಮತ್ತು ಒಂದು ಹೆಣ್ಣಾಳು ಎಲ್ಲಾ ತೋಟದಲ್ಲೂ ಖಾಯಮ್ಮು. ಆದರೆ ದುಡ್ಡಿಗೆ ತಕ್ಕಂತೆ ಇವರ ನೀಯತ್ತು ಬದಲಾಗುತ್ತಿರುವುದರಿಂದ ಈ ವರ್ಷ ನಮ್ಮನೆಯಲ್ಲಿದ್ದ ವೆಂಕ್ಟ ಮುಂದಿನ ವರ್ಷ ಪಕ್ಕದ ಸುಬ್ರಾಯ ಹೆಗ್ಡೆರ ಮನೆಯಲ್ಲಿರುತ್ತಾನೆ.   ನಮ್ಮ ಮನೆಯಲ್ಲಿ ತುಂಬಾ ವರ್ಷಗಳಿಂದಲೂ ಇದ್ದ ರಾಮ ಒಂದು ದಿನವೂ ಕೆಲಸ ತಪ್ಪಿಸಿದ್ದಿಲ್ಲ. ಬೆಳಿಗ್ಗೆ ಬಂದರೆ ತಿಂಡಿ ನಂತರ ಹನ್ನೊಂದರ ಚಾ ಮತ್ತೆ ಮೂರು ಘಂಟೆಗೆ ಊಟ ಮುಗಿಸಿಯೇ ಮನೆಗೆ ಹೋಗುತ್ತಿದ್ದವ. ಅವನ ಹೆಂಡ್ತಿ ಸಾವಿತ್ರಿಯೂ ಮನೆಗೆ ಕೆಲಸಕ್ಕೆ ಬರುವವಳೆ. ಅಜ್ಜಿಯ ಸಣ್ಣ ಪುಟ್ಟ ಕೆಲಸ ಮಾಡಿ ಕವಳ ಹಾಕಿ

ನನ್ನದಲ್ಲದ ಊರು ಮತ್ತದರ ಪ್ರಶ್ನೆಗಳು

ಯಾಕೋ ಬೇಸರ. ಮತ್ತದೇ ಬೇಸರ ಮತ್ತದೇ ಏಕಾಂತ ಹಾಡಿನಂತಲ್ಲ, ಎಲ್ಲ ಇದ್ದೂ ಕಾಡುವ ಬೇಸರ. ಇದೆಲ್ಲಾ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ. ಇವತ್ತು ಆಫಿಸಿನಿಂದ ಬರ್ತಾ ನನ್ನ ಅಪಾರ್ಟ್ಮೆಂಟಿನ ಬದಲು ಯಾವುದೋ ಮನೆ ಎದುರಿಗೆ ನಿಂತು ಕೀ ಹುಡುಕಾಟ. ತಕ್ಷಣ ಆದ realisation 'ಓ ಇದು ನಮ್ಮನೆಯಲ್ಲ' ಹಾಗಾದರೆ ಯಾವುದು ನಮ್ಮನೆ? ವರ್ಷಗಳ ಮೊದಲೇ ಬಿಟ್ಟು ಬಂದ, ಅಪ್ಪ ಅಮ್ಮ ಸಾಲ ಮಾಡಿ ಜತನದಿಂದ ಕಟ್ಟಿದ, ಈಗ ಬಣಗುಡುತ್ತಿರುವ ಮಲೆನಾಡಿನ ಗೂಡೇ, ವರ್ಷಕ್ಕೆರಡು ಬಾರಿ ಹೋಗಿ ನದಿ-ತೋಟ  -ನಾಯಿ ಎಂದು ಎದೆಯುಬ್ಬಿಸಿ ಓಡಾಡಿ ನಂತರ ಬೆಂಗಳೂರಿಗೆ ಬರುತ್ತಿದ್ದಂತೆ ಮರೆವ ಊರಿನ ತೋಟದ ಮನೆಯೇ, ವಿದ್ಯೆಯ ಜೊತೆಗೆ ಗೆಳೆತಿಯರನ್ನೂ ಕೊಟ್ಟು ಪೊರೆದ ಹಾಸ್ಟೆಲ್ಗಳೆ ಅಥವಾ guestನ್ನು ಹೆಸರಿನಲ್ಲಿ ಮಾತ್ರ ಉಳಿಸಿಕೊಂಡಿರುವ ಕಿಶ್ಕಿಂಧೆಗಳಂತಿರುವ ಪೀಜಿಗಳೇ? ಪ್ರಶ್ನೆಗಳ ಮೇಲೆ ಪ್ರಶ್ನೆ, ಉತ್ತರ ನಾಸ್ತಿ. ಇದು ಮನುಷ್ಯನ limitationನೇ ಇರಬೇಕು. ಚಿಂತೆ ಇಲ್ಲದ್ದಿದ್ದಾಗಲೂ ಚಿಂತೆ ಇಲ್ಲವಲ್ಲ ಅನ್ನುವುದೇ ಚಿಂತೆ. ನಾವು ಅಲ್ಲಿಯೂ ಸಲ್ಲದವರು ಇಲ್ಲಿಯೂ ಓಗ್ಗಿಕೊಳ್ಳದವರು. ಗುಜ್ಜೆ ಹುಳಿ ಮಾವಿನ ತಂಬುಳಿ ಪಟ್ಟಾಗಿ ಹೊಡೆದು ಕವಳ ಹಾಕಿ 'ಹೋಯ್ ಊರ್ ಬದಿ ಮತ್ತೆಂತು ಸಮಾಚಾರ' ಎನ್ನುವುದು ತೀರಾ time waste ಎನ್ನಿಸಿದರೂ ಇತ್ತ MG, Brigade ರೋಡಿನ ಸಿಗರೇಟಿನ ಮೋಡ ಸ್ರುಷ್ಟಿಸುವ Whats up dude ಎಂದು ಮುತ್ತಿಡುವ ಹುಡುಗಿಯರೂ ನಮಗೆ ದೂರವ