ಅಜ್ಜಿಯ ನೆನಪು!
ಯಾಕೋ ಇತ್ತೀಚಿಗೆ ಅಜ್ಜಿಯ ನೆನಪು ಹೆಚ್ಚಾಗಿಯೇ ಕಾಡ್ತಿದೆ. ಹದಿಮೂರಕ್ಕೆ ಮದುವೆಯಾಗಿ 12 ಮಕ್ಕಳ ತಾಯಿಯಾದ, ಸಣ್ಣ ವಯಸ್ಸಿಗೆ ಗಂಡನ ಕಳೆದುಕೊಂಡು ಬದುಕಿಡೀ ಮಕ್ಕಳು ಮೊಮ್ಮೊಕ್ಕಳ ಸೇವೆಯಲ್ಲೇ ಜೀವನ ಕಳೆದ ಅಜ್ಜಿ 5 ವರ್ಷದ ಹಿಂದೆ ತೀರಿಕೊಂಡಾಗ ಅವಳಿಗೆ ಆಜುಬಾಜು 96. ಏಳು ಹೆಣ್ಣಿನ ನಂತರ ಹುಟ್ಟಿದ ಮೊದಲ ಗಂಡೇ ನನ್ನಪ್ಪ. ಮನೆತುಂಬ ಅಕ್ಕ-ತಂಗಿಯರ ಜವಾಬ್ದಾರಿ, ಏನಾದರು ಮಾಡಲೇಬೇಕೆಂಬ ತುಡಿತದ ಅಪ್ಪ ಮಿಲ್ಟ್ರಿ ಸೇರಿದಾಗ ಅವನಿಗೆ 16. ದೊಡ್ಡ ಮಗ ಕೈಬಿಟ್ಟಂತೇ, ಮಿಲ್ಟ್ರಿಗೆ ಹೋದೋರು ಯಾರೂ ಜೀವಂತ ವಾಪಾಸ್ ಬರೋದೇ ಇಲ್ಲ ಎಂಬಂತಿದ್ದ ಆ ಕಾಲದಲ್ಲಿ ಅಜ್ಜಿ ಗಟ್ಟಿ ಮನಸ್ಸು ಮಾಡಿ ಕಳಿಸಿಕೊಟ್ಟಿದ್ದರಂತೆ. ಕನ್ನಡವೊಂದು ಬಿಟ್ಟರೆ ಬೇರೆ ಭಾಷೆ ಬಾರದ ಅಪ್ಪ ಮಿಲ್ಟ್ರಿ ಸೇರಿದಾಗ 'ಅಮ್ಮ ನಂಗೆ ಹಿಂದೀಲಿ ಉಪ್ಪಿಗೆ ಎಂತ ಹೇಳ್ತಾ ಹೇಳಿ ಗೊತ್ತಿಲ್ಲೆ. ಅದ್ಕೆ ಒಂದೊಂದು ಸಲ ಉಪ್ಪು ಕಮ್ಮಿ ಇದ್ರೂ ಹಂಗೆ ಊಟ ಮಾಡ್ತಾ ಇದ್ದಿ' ಎಂದು ಕಾಗದ ಬರೆದಿದ್ದನ್ನು ಅಜ್ಜಿ ತುಂಬಾ ಸಲ ನೆನೆಸಿಕೊಂಡು ಹೇಳುತ್ತಿದ್ದರು. ಮೊದಲ ಗಂಡು ಮಗನಿಗೆ ನಾವಿಬ್ಬರೂ ಹೆಣ್ಣು ಮಕ್ಕಳೇ ಆದರೂ ಒಂದು ದಿನವೂ ಆಕೆ ನಮ್ಮನ್ನು ಅಸಡ್ಡೆಯಿಂದ ನೋಡಿದ್ದಿಲ್ಲ. ಪ್ರತಿ ಸಲ ಮನೆಯಿಂದ ಶಿವಮೊಗ್ಗೆಗೆ ಹೊರಡುವಾಗಲೂ 'ಮತ್ತ್ಯಾವಾಗ ಬತ್ತ್ಯೇ ಪುಟ್ಟಿ?' ಎಂದು ಕೇಳುತಿದ್ದ ಆಕೆಯ ಅಸೆ ಕಂಗಳು ನಂಗಿನ್ನೂ ನೆನಪಿವೆ. ಗಂಡ ಎಳವೆಯಲ್ಲೇ ತೀರಿಹೋಗಿದ್ದರೂ ...